DrBagi Heartcentre

Directions Website

DrBagi Heartcentre Contact information, map and directions, contact form, opening hours, services, ratings, photos, videos and announcements from DrBagi Heartcentre, Medical and health, #2, 32nd cross, 9th main, 4th block jayanagar, Bangalore.

28/10/2026

ಏನಿದು, ಜೀವ ಉಳಿಸುವ AICD ಸಾಧನ?
ಫುಲ್ ಡೀಟೇಲ್ಸ್!ಯುವಕರಲ್ಲಿ ಮತ್ತು ಅಥ್ಲೀಟ್‌ಗಳಲ್ಲಿ ಹೃದಯಾಘಾತ (Sudden Cardiac Arrest) ಆಗಲು ಪ್ರಮುಖ ಕಾರಣಗಳಲ್ಲಿ ಒಂದಾದ 'ಹೈಪರ್‌ಟ್ರೋಫಿಕ್ ಕಾರ್ಡಿಯೋಮಯೋಪತಿ' (Hypertrophic Cardiomyopathy) ಹಾಗೂ ಜೀವ ಉಳಿಸುವ 'AICD' (Intracardiac Defibrillator) ಸಾಧನದ ಬಗ್ಗೆ ವಿವರವಾಗಿ ತಿಳಿಸಿಕೊಟ್ಟಿದ್ದಾರೆ. ಈ ಪ್ರಮುಖ ಆರೋಗ್ಯ ಮಾಹಿತಿಯನ್ನು ತಪ್ಪದೆ ವೀಕ್ಷಿಸಿ ಮತ್ತು ಹಂಚಿಕೊಳ್ಳಿ!

27/10/2026

ಆತಂಕ ಮತ್ತು ಹೃದಯ ಬಡಿತ: ಕಾರಣಗಳು ಮತ್ತು ಪರಿಹಾರಗಳು..!
ಆತಂಕದಿಂದ ಹೃದಯ ಬಡಿತ ಹೆಚ್ಚಾಗುತ್ತಿದೆಯೇ? ಇದು ಸಾಮಾನ್ಯ ಸಮಸ್ಯೆಯೇ ಅಥವಾ ಗಂಭೀರ ಹೃದಯದ ಕಾಯಿರೆಯ ಲಕ್ಷಣವೇ? ಹೃದಯ ಬಡಿತದ ಏರಿಳಿತ (Palpitations) ಮತ್ತು ಅದರ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಸಂಗತಿಗಳ ಕುರಿತು ಡಾ. ವಿಠಲ್ ಡಿ. ಬಾಗಿ ಅವರು ಸಂಪೂರ್ಣ ಮಾಹಿತಿ ನೀಡಿದ್ದಾರೆ. ವೀಕ್ಷಿಸಿ, ಎಚ್ಚೆತ್ತುಕೊಳ್ಳಿ!

23/10/2026

ಎದೆ ಬಡಿತ (Palpitations) ಅಥವಾ ಹೃದಯದ ಬಡಿತದಲ್ಲಿ ಏರಿಳಿತ ಉಂಟಾಗಲು ಪ್ರಮುಖ ಕಾರಣಗಳೇನು ಮತ್ತು ಅದಕ್ಕೆ EP Study (Electrophysiological Study) ಹಾಗೂ ಇತರ ವೈದ್ಯಕೀಯ ತಪಾಸಣೆಗಳು ಹೇಗೆ ನೆರವಾಗುತ್ತವೆ ಎಂಬುದನ್ನು ಹಿರಿಯ ಹೃದಯ ತಜ್ಞರಾದ ಡಾ. ವಿಠ್ಠಲ್ ಡಿ. ಬಾಗಿ ಅವರು ಈ ವೀಡಿಯೊದಲ್ಲಿ ವಿವರವಾಗಿ ತಿಳಿಸಿದ್ದಾರೆ....

22/10/2026

ಹೃದಯದ ಬಡಿತದಲ್ಲಿ ಏರಿಳಿತ ಅಥವಾ ಅರಿತ್ಮಿಯಾ (Arrhythmia) ಎಂದರೇನು, ಅದರ ಲಕ್ಷಣಗಳು, ತಕ್ಷಣದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ೨೪-ಗಂಟೆಗಳ ಹಾಲ್ಟರ್ (Holter) ಟೆಸ್ಟ್ ಬಗ್ಗೆ ಈ ವೀಡಿಯೊದಲ್ಲಿ ವಿವರವಾಗಿ ತಿಳಿಸಿದ್ದಾರೆ....

15/10/2026

ಹೃದಯ ಬಡಿತದಲ್ಲಿ ಏರಿಳಿತ ಅಥವಾ ಪಾಲ್ಪಿಟೇಷನ್ (Palpitation) ಎಂದರೇನು? ಹೃದಯದ ಬಡಿತದಲ್ಲಿ ವ್ಯತ್ಯಾಸವಾಗಲು ಕಾರಣಗಳೇನು ಮತ್ತು ಆತಂಕ ಹಾಗೂ ಭಯಕ್ಕೂ ಹೃದಯದ ಬಡಿತಕ್ಕೂ ಇರುವ ಸಂಬಂಧವೇನು ಎಂಬುದನ್ನು ಕಾರ್ಡಿಯಾಲಜಿಸ್ಟ್ ಡಾ. ವಿಠ್ಠಲ್ ಡಿ. ಬಾಗಿ ಅವರು ಈ ವೀಡಿಯೊದಲ್ಲಿ ವಿವರವಾಗಿ ತಿಳಿಸಿದ್ದಾರೆ...

13/10/2026

ಹೃದಯದ ರಕ್ತನಾಳದ ಬ್ಲಾಕೇಜ್‌ಗಳಿಗೆ ಚಿಕಿತ್ಸೆ ನೀಡುವ ಬೈಪಾಸ್ ಸರ್ಜರಿ (Bypass Surgery) ಮತ್ತು ಆಂಜಿಯೋಪ್ಲ್ಯಾಸ್ಟಿ (Angioplasty) ಇತಿಹಾಸ ಹಾಗೂ ಅವುಗಳ ಬೆಳವಣಿಗೆಯ ಬಗ್ಗೆ ಬಗ್ಗೆ ಸಣ್ಣ ವಿವರಣೆ.. 1960ರಲ್ಲಿ ಮೊದಲ ಬೈಪಾಸ್ ಸರ್ಜರಿ ಆರಂಭವಾಯಿತು. ನಂತರ 1977ರಲ್ಲಿ ಡಾ. ಆಂಡ್ರಿಯಾಸ್ ಗ್ರಂಟ್ಜಿಗ್ (Dr. Andreas Grüntzig) ಅವರು ಮೊದಲ ಬಾರಿಗೆ ಬಲೂನ್ ಆಂಜಿಯೋಪ್ಲ್ಯಾಸ್ಟಿ ಯಶಸ್ವಿಯಾಗಿ ಪ್ರಯೋಗಿಸಿದರು. ಕಾಲಕ್ರಮೇಣ ವೈದ್ಯಕೀಯ ವಿಜ್ಞಾನದಲ್ಲಿ ಆದ ಈ ಪ್ರಮುಖ ಬದಲಾವಣೆಗಳು ಮತ್ತು ಆಧುನಿಕ ಚಿಕಿತ್ಸಾ ಪದ್ಧತಿಗಳ ಬಗ್ಗೆ ಮಾಹಿತಿ ನಿಮ್ಮ ಮುಂದೆ!

03/10/2026

ಕಟಿಂಗ್ ಬಲೂನ್ ಆಂಜಿಯೋಪ್ಲಾಸ್ಟಿ ಎಂದರೇನು? (Cutting Balloon Angioplasty) 🫀ಸಣ್ಣ ವಿವರಣೆ:
ಹೃದಯದ ರಕ್ತನಾಳಗಳಲ್ಲಿ ಕಡಿಮೆ ಅಥವಾ ಸಾಧಾರಣ ಪ್ರಮಾಣದ ಕ್ಯಾಲ್ಸಿಯಂ (Calcium) ಶೇಖರಣೆಯಾಗಿದ್ದಾಗ 'ಕಟಿಂಗ್ ಬಲೂನ್ ಆಂಜಿಯೋಪ್ಲಾಸ್ಟಿ' ಚಿಕಿತ್ಸೆಯನ್ನು ನೀಡಲಾಗುತ್ತದೆ. ಈ ವಿಶೇಷ ಬಲೂನ್‌ನಲ್ಲಿ ಸೂಕ್ಷ್ಮ ಬ್ಲೇಡ್‌ಗಳಿರುತ್ತವೆ. ಇದು ಕ್ಯಾಲ್ಸಿಯಂ ಇರುವ ಭಾಗದಲ್ಲಿ ಸಣ್ಣ ಕಟ್‌ಗಳನ್ನು (Incision) ಮಾಡಿ, ರಕ್ತನಾಳವು ಸುಲಭವಾಗಿ ಹಿಗ್ಗುವಂತೆ ಮಾಡುತ್ತದೆ. ಇದರಿಂದ ನಂತರ ಸ್ಟೆಂಟ್ (Stent) ಅಳವಡಿಸುವುದು ಸುಲಭವಾಗುತ್ತದೆ.

01/10/2026

ಇಂಟ್ರಾವಾಸ್ಕುಲರ್ ಲಿಥೋಟ್ರಿಪ್ಸಿ (IVL) ಚಿಕಿತ್ಸೆ ಮತ್ತು ಅದರ ಉಪಯೋಗಗಳು...!
ಹೃದಯದ ರಕ್ತನಾಳಗಳಲ್ಲಿ ಗಟ್ಟಿಯಾದ ಕ್ಯಾಲ್ಸಿಯಂ ಶೇಖರಣೆಯಾಗಿದ್ದಾಗ 'ಇಂಟ್ರಾವಾಸ್ಕುಲರ್ ಲಿಥೋಟ್ರಿಪ್ಸಿ' (IVL) ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ವಿಶೇಷ ಬಲೂನ್ ಮೂಲಕ ಶೋಕ್ ವೇವ್ಸ್ (Shockwaves) ಅಥವಾ ಅಲ್ಟ್ರಾಸಾನಿಕ್ ತರಂಗಗಳನ್ನು ಬಿಟ್ಟು ಗಟ್ಟಿಯಾದ ಕ್ಯಾಲ್ಸಿಯಂ ಅನ್ನು ಪುಡಿಪುಡಿ ಮಾಡಲಾಗುತ್ತದೆ. ಇದರಿಂದ ರಕ್ತನಾಳಗಳಲ್ಲಿ ಸ್ಟೆಂಟ್ (Stent) ಅನ್ನು ಅತ್ಯಂತ ಸುರಕ್ಷಿತವಾಗಿ ಮತ್ತು ಸರಿಯಾಗಿ ಅಳವಡಿಸಲು ಸಾಧ್ಯವಾಗುತ್ತದೆ.

ವಿಶ್ವ ಹೃದಯ ದಿನದ ಶುಭಾಶಯಗಳು!"ನಿಮ್ಮ ಹೃದಯ ನಿಮ್ಮ ಜೀವನದ ಇಂಜಿನ್. ಅದನ್ನು ಪ್ರೀತಿಯಿಂದ ನೋಡಿಕೊಳ್ಳಿ, ಆರೋಗ್ಯಕರ ಅಭ್ಯಾಸಗಳಿಂದ ಕಾಪಾಡಿಕೊಳ್ಳ...
29/09/2026

ವಿಶ್ವ ಹೃದಯ ದಿನದ ಶುಭಾಶಯಗಳು!
"ನಿಮ್ಮ ಹೃದಯ ನಿಮ್ಮ ಜೀವನದ ಇಂಜಿನ್. ಅದನ್ನು ಪ್ರೀತಿಯಿಂದ ನೋಡಿಕೊಳ್ಳಿ, ಆರೋಗ್ಯಕರ ಅಭ್ಯಾಸಗಳಿಂದ ಕಾಪಾಡಿಕೊಳ್ಳಿ."

29/09/2026

ಆರ್ಬಿಟಲ್ ಅಥರೆಕ್ಟಮಿ ಎಂದರೇನು?
ಕ್ಯಾಲ್ಸಿಯಂ ತೆಗೆಯುವ ಚಿಕಿತ್ಸೆ..!
ರಕ್ತನಾಳಗಳಲ್ಲಿ ಜಮೆಯಾಗಿರುವ ಕಠಿಣ ಕ್ಯಾಲ್ಸಿಯಂ ಬ್ಲಾಕೇಜ್‌ಗಳನ್ನು ತೆಗೆದುಹಾಕಲು ಬಳಸುವ ಆರ್ಬಿಟಲ್ ಅಥರೆಕ್ಟಮಿ (Orbital Atherectomy) ಪ್ರಕ್ರಿಯೆ...ಈ ಚಿಕಿತ್ಸೆಯಲ್ಲಿ ವಿಶೇಷವಾದ ಸುತ್ತುವ ಸಾಧನವನ್ನು ಬಳಸಿ ಕ್ಯಾಲ್ಸಿಯಂ ಅನ್ನು ಕತ್ತರಿಸಿ ರಕ್ತನಾಳದ ಜಾಗವನ್ನು ವಿಸ್ತರಿಸಲಾಗುತ್ತದೆ, ನಂತರ ಬಲೂನ್ ಅಥವಾ ಸ್ಟೆಂಟ್ ಮೂಲಕ ರಕ್ತಸಂಚಾರವನ್ನು ಸುಗಮಗೊಳಿಸಲಾಗುತ್ತದೆ.

#ಆರ್ಬಿಟಲ್_ಅಥರೆಕ್ಟಮಿ #ಹೃದಯಆರೋಗ್ಯ #ಆಂಜಿಯೋಪ್ಲ್ಯಾಸ್ಟಿ #ಆರೋಗ್ಯಸಲಹೆ #ಕನ್ನಡಆರೋಗ್ಯ #ಡಾ_ವಿಠಲ್_ಬಾಗಿ

Address

#2, 32nd Cross, 9th Main, 4th Block Jayanagar
Bangalore
560011

Alerts

Be the first to know and let us send you an email when DrBagi Heartcentre posts news and promotions. Your email address will not be used for any other purpose, and you can unsubscribe at any time.

Shortcuts

Share

Nearby health & beauty businesses